fbpx

ಹೈಕೋರ್ಟ್ ನಿಂದ ಗ್ಯಾರಂಟಿ ಯೋಜನೆಗೆ ಸ್ಪಷ್ಟ ನಿರ್ಧಾರ: ಏನಿದು ಹೊಸ ಟ್ವಿಸ್ಟ್.?

ನಮಸ್ಕಾರ ಸ್ನೇಹಿತರೇ ಕಾಂಗ್ರೆಸ್ ಪಕ್ಷವು ಚುನಾವಣೆಗೂ ಪೂರ್ವದಲ್ಲಿ ರಾಜ್ಯದಲ್ಲಿ ಮಹತ್ವದ ಯೋಜನೆಗಳನ್ನು ಜಾರಿಗೆ ತರಲು ಯೋಜನೆ ನಡೆಸಿತ್ತು ಅದರಂತೆ ಈ ಮಹತ್ವದ ಯೋಜನೆಗಳ ಬಗ್ಗೆ ಸಾಕಷ್ಟು ವಿಚಾರವಾಗಿ ಚರ್ಚೆಯಾಗಿತ್ತು. ಮೂಲಕ ಪಂಚ ಯೋಜನೆಗಳ ಭರವಸೆಯನ್ನು ರಾಜ್ಯ ಸರ್ಕಾರ ನೀಡುವ ಜೊತೆ ಜೊತೆಗೆ ಹಲವಾರು ಪೋಸ್ಟ್ಗಳು ಕೂಡ ವೈರಲ್ ಆಗುತ್ತಿದ್ದವು. ಅಂದರೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಫೋಟೋ ಇರುವ ಜಾಹೀರಾತುಗಳಿಗೆ ಗೃಹಲಕ್ಷ್ಮಿ ಯೋಜನೆ ಗೃಹಜ್ಯೋತಿ ಯೋಜನೆಯ ಶಕ್ತಿ ಯೋಜನೆ ಅನ್ನಭಾಗ್ಯ ಯೋಜನೆ ಮತ್ತು ಯುವ ನಿಧಿ ಯೋಜನೆಗೆ ಅಳವಡಿಕೆ ಮಾಡಲಾಗಿದ್ದು ಸಜ್ಜ ಈ ಬಗ್ಗೆ ಒಂದು ಸ್ಪಷ್ಟ ನಿರ್ಧಾರವನ್ನು ಹೈಕೋರ್ಟ್ ತಿಳಿಸಿದೆ. ಹಾಗಾದರೆ ಹೈಕೋರ್ಟ್ ನಿಂದ ಯಾವ ನಿರ್ಧಾರ ಮಾಡಲಾಗಿದೆ ಎಂಬುದರ ಬಗ್ಗೆ ಇದೀಗ ನಿಮಗೆ ತಿಳಿಸಲಾಗುತ್ತದೆ.

High Court Guarantee Scheme Clarity

ಗ್ಯಾರೆಂಟಿ ಯೋಜನೆಗಳ ಬಗ್ಗೆ ಚರ್ಚೆ :

ಭೀಮಪ್ಪ ಗಡ ಅವರು ಇತ್ತೀಚಿಗೆ ಬೆಳಗಾವಿಯ ಸಾಮಾಜಿಕ ಕಾರ್ಯಕರ್ತರಾಗಿದ್ದು ಅವರು ಹೈಕೋರ್ಟ್ ಗೆ ಒಂದು ಮನವಿಯ ಅರ್ಜಿಯನ್ನು ಸಲ್ಲಿಸಿದ್ದಾರೆ. ಈ ಮನವಿಯ ಅಡಿಯಲ್ಲಿ ಕರ್ನಾಟಕದಲ್ಲಿ ಜಾರಿಗೆ ಬಂದಿರುವಂತಹ ಮಹತ್ವದ ಯೋಜನೆಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕಾಂಗ್ರೆಸ್ ಸದಸ್ಯರ ಫೋಟೋ ಇರುವಂತಹ ಜಾಹೀರಾತು ಅನ್ನಭಾಗ್ಯದ ಫಲಾನುಭವಿಗಳಿಗೆ ನೀಡಲಾಗುವ ಮಂಜೂರಾತಿ ಪತ್ರಗಳಲ್ಲಿ ಇರುವಂತಹ ಭಾವಚಿತ್ರವನ್ನು ತೆರವುಗೊಳಿಸಲು ಹೈಕೋರ್ಟ್ ನಿರ್ದೇಶನ ನೀಡಬೇಕೆಂದು ಬೆಳಗಾವಿಯ ಸಾಮಾಜಿಕ ಕಾರ್ಯಕರ್ತ ಭೀಮಪ್ಪ ಗಡವರು ಹೈಕೋರ್ಟ್ ಗೆ ಸಲ್ಲಿಸಿದ್ದ ಮನವಿಯಲ್ಲಿ ತಿಳಿಸಲಾಗಿದ್ದು ಅದರ ಬಗ್ಗೆ ಇದೀಗ ಚರ್ಚೆಗೆ ಕಾರಣವಾಗಿದೆ.

ಹೈಕೋರ್ಟ್ನ ಸ್ಪಷ್ಟತೆ :

ಈ ವಿಚಾರವಾಗಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಪಿಬಿ ವರಾಳೆ ಅವರ ನೇತೃತ್ವದಲ್ಲಿ ನ್ಯಾಯ ಪೀಠವು ಒಂದು ಸ್ಪಷ್ಟ ತೀರ್ಪನ್ನು ನೀಡುವುದರ ಮೂಲಕ ರಾಜ್ಯದ ಜನತೆಗೆ ಮಾಹಿತಿಯನ್ನು ತಿಳಿಸಿದೆ. ಅರ್ಜಿದಾರರು ಸಲ್ಲಿಸಿದ್ದಂತಹ ಅಜ್ಜಿಯಲ್ಲಿ ಆ ಪರಿಗಣಿಸಿ ದಂತಹ ಯಾವುದೇ ಅಂಶವು ಕಂಡುಬಂದಿಲ್ಲ ಹಾಗಾಗಿ ಇಂತಹ ಕಾರಣಕ್ಕಾಗಿ ಅರ್ಜಿ ಸಲ್ಲಿಕೆ ಪರಿಗಣಿಸುವಂತಹದ್ದು ಅಲ್ಲ ಎಂದು ಈ ಮನವಿಯನ್ನು ಹೈಕೋರ್ಟ್ ತಿರಸ್ಕರಿಸಿತು ಹಾಗಾಗಿ ಯಾವುದೇ ಜಾಹಿರಾತುಗಳಲ್ಲಿ ಫೋಟೋ ವಿಚಾರವಾಗಿ ಈ ಮೂಲಕ ತನ್ನ ಸ್ಪಷ್ಟನೆಯನ್ನು ಹೈಕೋರ್ಟ್ ತಿಳಿಸಿದೆ ಎಂದು ಹೇಳಬಹುದಾಗಿದೆ.

ಪರಿಷ್ಕರಣೆ ಮಾಡುವ ಅಂಶ ಇಲ್ಲ :

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಹಾಗೂ ಇತರ ಸಚಿವರ ಫೋಟೋವನ್ನು ಗೃಹಲಕ್ಷ್ಮಿ ಯೋಜನೆ, ಗೃಹಜೋತಿ ಯೋಜನೆ, ಶಕ್ತಿ ಯೋಜನೆ ಹಾಗೂ ಇನ್ನಿತರ ಯಾವುದೇ ಯೋಜನೆಗಳಿಗೆ ಜಾಹೀರಾತು ಅಥವಾ ಫಲಾನುಭವಿ ಪತ್ರದಲ್ಲಿ ಫೋಟೋ ಅಳವಡಿಸಬಾರದು ಎಂದು ಹೈಕೋರ್ಟ್ ಆದೇಶ ಉಲ್ಲಂಘನೆ ಎಂದು ಅರ್ಜಿದಾರರು ಬಯಸಿದ್ದರು ಸಹ ಈ ಬಗ್ಗೆ ಹೈಕೋರ್ಟ್ ಪರಿಷ್ಕರಣೆ ಮಾಡುವ ಅಂಶ ಇಲ್ಲ ಎಂದು ಈ ಅರ್ಜಿಯನ್ನು ಸದ್ಯ ಇದೀಗ ವಜಗೊಳಿಸಿದೆ.

ಒಟ್ಟಾರೆಯಾಗಿ ಈ ಲೇಖನದಲ್ಲಿ ನಿಮಗೆ ತಿಳಿಸುತ್ತಿರುವ ವಿಷಯ ಏನೆಂದರೆ, ಸರ್ಕಾರದ ಯಾವುದೇ ಯೋಜನೆಗಳಿಗೆ ಸಂಬಂಧಿಸಿದಂತೆ ಹೈಕೋರ್ಟ್ ಸರ್ಕಾರಕ್ಕೆ ಇದರ ವಿಚಾರವಾಗಿ ಬಿಟ್ಟಿದ್ದು ಸದ್ಯ ಕಾಂಗ್ರೆಸ್ ಆಡಳಿತದ ಅವಧಿಯ ಎಲ್ಲಾ ಯೋಜನೆಗೆ ಮಹತ್ವದ ಸ್ಥಾನ ತುಂಬುತ್ತಲಿದ್ದು ಇದೀಗ ಗೃಹಲಕ್ಷ್ಮಿ ಯೋಜನೆ ಮಾತ್ರ ಸಾಕಷ್ಟು ಸುದ್ದಿಯಲ್ಲಿದೆ ಹಾಗೂ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ಎಲ್ಲರೂ ಮಹಿಳೆಯರು ಈ ಯೋಜನೆಯ ಪ್ರಯೋಜನವನ್ನು ಪಡೆದು ಖುಷಿಯಾಗಿದ್ದಾರೆ ಎಂದು ಹೇಳಬಹುದಾಗಿದೆ. ಹೀಗೆ ಹೈಕೋರ್ಟ್ ನೀಡಿರುವ ಈ ಯೋಜನೆಗಳ ಭಾವಚಿತ್ರದ ಬಗ್ಗೆ ನಿಮ್ಮೆಲ್ಲ ಸ್ನೇಹಿತರಿಗೂ ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು:

ಕೇಂದ್ರ ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್, ಯಾವುದೇ ಗ್ಯಾರಂಟಿ ಇಲ್ಲದೇ 10 ಲಕ್ಷ ರೂ.ವರೆಗೆ ಸಾಲ ಪಡೆಯಿರಿ, ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ರಾಜ್ಯದ ಮಹಿಳೆಯರಿಗೆ ಹೊಸ ಯೋಜನೆ, ಮಹಿಳೆಯರಿಗೆ 5 ಲಕ್ಷ ರೂಪಾಯಿಯಿಂದ 10 ಲಕ್ಷ ರೂಪಾಯಿವರೆಗೆ ಸಾಲ, ಹೇಗೆ ಅರ್ಜಿ ಸಲ್ಲಿಸುವುದು ಎಂಬ ಮಾಹಿತಿ ಇಲ್ಲಿದೆ.

Leave a Comment