fbpx

(Business success story) ಉದ್ಯಮ ಸಾಧಕರು

ಉದ್ಯಮ ಸಾಧಕರು

ವಿದೇಶದಲ್ಲಿ ಉದ್ಯಮ ಸ್ಥಾಪಿಸಿ ಗೆದ್ದ ಗ್ರಾಮೀಣ ಪ್ರತಿಭೆ ಡಾ.ಅಶ್ರಫ್ ಕಮ್ಮಾಡಿ

ದಶಕಗಳ ಹಿಂದೆ ಉದ್ಯೋಗ ನಿಮಿತ್ತ ವಿದೇಶದತ್ತ ಬದುಕಿನ ಪಯಣಕ್ಕೆ ಮುನ್ನುಡಿ ಬರೆದು, ಅಲ್ಲಿ ಸ್ವಂತ ಉದ್ಯಮವನ್ನು ಸ್ಥಾಪಿಸಿ ಯಶಸ್ವಿ ಅನಿವಾಸಿ ಉದ್ಯಮಿಯಾಗಿ ದೇಶ ವಿದೇಶಗಳಲ್ಲಿ ಗುರುತಿಸಲ್ಪಟ್ಟವರು ಡಾ.ಅಶ್ರಫ್ ಎಸ್.ಕಮ್ಮಾಡಿ. ಇವರು ದ.ಕ ಜಿಲ್ಲೆಯ ಪುತ್ತೂರು ತಾಲೂಕಿನವರು. ಇಂದು ವಿದೇಶದಲ್ಲಿ ಯಶಸ್ವಿ ಉದ್ಯಮಿಯಾಗಿರುವ ಜೊತೆಯಲ್ಲಿ ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಮಿಂಚುತ್ತಿರುವ ಅಪರೂಪದ ಸಾಧಕ ಈ ಅಶ್ರಫ್.

ಕಾಲೇಜು ಬದುಕಿನಲ್ಲೇ ರಾಷ್ಟ್ರೀಯ ಸೇವಾ ಯೋಜನೆ ಮತ್ತಿತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಾ ಸಾಮಾಜಿಕ ಸೇವೆಯ ತುಡಿತವನ್ನು ಮೈಗೂಡಿಸಿಕೊಂಡಿದ್ದ ಆಶ್ರಫ್ ಅವರು, ಶಿಕ್ಷಣದ ಬಳಿಕ ವೃತ್ತಿ ಜೀವನದ ಜತೆಯಲ್ಲಿ ಸಾಮಾಜಿಕ, ಶೈಕ್ಷಣಿಕ, ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರೀಯರಾದವರು. ಆರಂಭದಲ್ಲಿ ತಂದೆಯವರ ಕಮ್ಮಾಡಿ ಪ್ರೈವುಡ್ ಇಂಡಸ್ಟ್ರೀ ಸಂಸ್ಥೆಯಲ್ಲಿ ಕೆಲಸ ಮಾಡುವುದರ ಜೊತೆಗೆ ಕೃಷಿ, ರಿಯಲ್ ಎಸ್ಟೇಟ್ ಉದ್ಯಮದಲ್ಲೂ ತೊಡಗಿಸಿಕೊಂಡವರು. ಹಲವು ಸಾಮಾಜಿಕ ಸಂಘಟನೆಗಳಲ್ಲಿ ತೊಡಗಿಸಿಕೊಂಡು ಸಮಾಜಮುಖಿ ಸೇವಾಕಾರ್ಯಗಳಲ್ಲೂ ಮುಂಚೂಣಿಯ ಯುವ ನಾಯಕರಾಗಿ ಗಮನಸೆಳೆದವರು.

ಸ್ವಾಭಿಮಾನದ ಬದುಕಿನ ಕನಸು ಹೊತ್ತ ಅಶ್ರಫ್ ಅವರು ಹತ್ತು ವರ್ಷಗಳ ಹಿಂದೆ ವಿದೇಶ ಪ್ರಯಾಣ ಬೆಳೆಸಿದರು. ತನ್ನ ವಿಶೇಷ ಪ್ರಯತ್ನ, ಅವಿರತ ಶ್ರಮ, ಸಾಧನೆಯ ಹಂಬಲದಿಂದ ವಿದೇಶದಲ್ಲಿ ತನ್ನದೇ ಆದ ಸ್ವಂತ ಉದ್ಯಮವನ್ನುಆರಂಭಿಸಿ ಮುನ್ನಡೆದವರು. ಡೈಮಂಡ್ ಉದ್ಯಮವನ್ನು ವಿದೇಶಿ ನೆಲದಲ್ಲಿ ಸ್ಥಾಪಿಸಿ ಹಂತ ಹಂತವಾಗಿ ವಿಸ್ತರಿಸುತ್ತಾ, ಯಶಸ್ವಿ ಉದ್ಯಮಿಯಾಗಿ ಗಮನ ಸೆಳೆದವರು.ಅಸ್ಕೋ ಡೈಮಂಡ್ಸ್ ಹೆಸರಿನ ಸಂಸ್ಥೆಯ ವಿವಿಧ ಘಟಕಗಳನ್ನು ಝಾಂಬಿಯಾ, ಬಹರೈನ್, ಹಾಂಕಾಂಗ್ ಮೊದಲಾದ ದೇಶಗಳಲ್ಲಿ ಆರಂಭಿಸಿ ಉದ್ಯಮ ಕ್ಷೇತ್ರದಲ್ಲಿ ಸೈ ಎನಿಸಿಕೊಂಡರು.

ಉದ್ಯಮ ಕ್ಷೇತ್ರದ ಪ್ರಯಾಣದ ಕಡಿಮೆ ಅವಧಿಯಲ್ಲಿಯೇ ಗರಿಷ್ಠ ಸಾಧನೆಗೈದು ವಿದೇಶ ಸಹಿತ ತಾಯ್ಯಾಡಿನ ನೆಲದಲ್ಲಿ ಯಶಸ್ವಿ ಅನಿವಾಸಿ ಉದ್ಯಮಿ ಎಂಬ ಹೆಗ್ಗಳಿಕೆಗೆ ಪಾತ್ರರಾದವರು ಅಶ್ರಫ್ ಕಮಾಡಿ. ಸದ್ಯ ಅಶ್ರಫ್ ಅವರು ಬಹರೈನ್ ನಲ್ಲಿರುವ ಅಸ್ಕೋ ಸಂಸ್ಥೆಯ ಚೇರ್ಮ್ಯಾನ್ ಹಾಂಕಾಂಗ್ ನ ಅಸ್ಕೋ ಇನ್ವೆಸ್ಟ್ ಮೆಂಟ್ ಸಂಸ್ಥೆಯ ಡೈರೆಕ್ಟರ್ ಹಾಗೂ ನಾಗಶ್ರೀ ಗಾರ್ಡನ್ಸ್ ಸಂಸ್ಥೆಯ ಪಾಲುದಾರರಾಗಿಯೂ ತೊಡಗಿಸಿಕೊಂಡಿದ್ದಾರೆ. ತನ್ನ ಉದ್ಯಮ ಸಂಸ್ಥೆಗಳ ಮೂಲಕ 1,800ಕ್ಕೂ ಹೆಚ್ಚು ಮಂದಿಗೆ ಉದ್ಯೋಗ ಅವಕಾಶ ನೀಡುತ್ತಾ ಅವರ ಬದುಕಿಗೆ ಬೆಳಕಾಗಿದ್ದಾರೆ.

ಅಶ್ರಫ್ ಅವರ ಸಾಧನೆ ಉದ್ಯಮ ಕ್ಷೇತ್ರಕ್ಕಷ್ಟೇ ಸೀಮಿತವಲ್ಲ. ಸಾಮಾಜಿಕ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲೂ ಸಕ್ರೀಯರಾಗಿ ಸಾಮಾಜಿಕ ಪ್ರಗತಿಗೆ ಅಶ್ರಫ್ ಅವರು ನೀಡಿದ ಕೊಡುಗೆಯು ಅಪಾರವಾದುದು.ಪುತ್ತೂರು ತಾಲೂಕಿನ ಹಲವು ಶಾಲೆಗಳ ಹದಿನೈದು ಸಾವಿರಕ್ಕೂ ಹೆಚ್ಚು ಮಕ್ಕಳಿಗೆ ಉಚಿತವಾಗಿ ಪುಸ್ತಕವನ್ನು ವಿತರಿಸಿರುವುದರ ಜತೆಯಲ್ಲಿ ಅನೇಕ ಶಾಲೆಗಳಿಗೆ ಬಿಸಿಯೂಟದ ಸಲಕರಣೆಗಳನ್ನು ಒದಗಿಸಿದ್ದಾರೆ.ಶಾಲಾ ಮಕ್ಕಳನ್ನು ದತ್ತು ಸ್ವೀಕರಿಸಿ ಅವರಿಗೆ ಬೇಕಾದ ಶೈಕ್ಷಣಿಕ ಅವಶ್ಯಕತೆಗಳನ್ನು ಪೂರೈಸುತ್ತಿದ್ದಾರೆ. ಅನಾರೋಗ್ಯಪೀಡಿತರಿಗೆ ಆರ್ಥಿಕ ನೆರವು ನೀಡುವುದು,ಸಂಕಷ್ಟದಲ್ಲಿರುವವರ ಕಷ್ಟಕ್ಕೆ ಸ್ಪಂದಿಸುವುದು, ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ಕ್ರೀಡಾ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವುದನ್ನು ಅಶ್ರಫ್ ಅವರು ಪ್ರಾಮಾಣಿಕವಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಕರ್ನಾಟಕ ಒಲಿಂಪಿಕ್ ಎಸೋಶಿಯೇಶ ಸಂಸ್ಥೆಗಳ ಸದಸ್ಯರಾಗಿಯೂ ಗಮನಾರ್ಹ ಸೇವೆ ಸಲ್ಲಿಸಿದ್ದಾರೆ.

ಸಾಮಾನ್ಯ ಹೆಣ್ಣುಮಗಳು ಇಂದು ಕೋಟಿ ಕೋಟಿ ಗಳಿಸಿದ ಯಶೋಗಾಥೆ!

ಹೆಣ್ಣು ಮನಸು ಮಾಡಿದರೆ ಏನನ್ನಾದರೂ ಸಾಧನೆ ಮಾಡಬಹುದು ಎಂಬುದಕ್ಕೆ ರಿಧೀಮಾ ಅರೋರಾ ಉದಾಹರಣೆಯನ್ನು ಕೊಡಬಹುದು ಎಷ್ಟೇ ಕಷ್ಟ ಬಂದರೂ ಎದುರಿಸಿ ಜೀವನದಲ್ಲಿ ಗೆಲುವಿನ ದಡ ಸೇರುವವಳು ಹೆಣ್ಣು. ಎಂಬಿಎ ಪದವೀಧರರಾಗಿ ಸ್ವಂತ ಉದ್ಯಮದಲ್ಲಿ ತೊಡಗಿದ ಛಲಗಾರ್ತಿಯ ಹೆಣ್ಣುಮಗಳ ಕಥೆ.ರಿಧಿಮಾ ತನ್ನ ತಂದೆಯ ಆರೋಗ್ಯವನ್ನು ಕಾಪಾಡಲು ಹೋರಾಡಿದಾಗ ಯಾವ ಪ್ರಯೋಜನವೂ ಇರಲಿಲ್ಲ ಅವರು ಒಂದು ಕಾಯಿಲೆಯಿಂದ ಬಳಲುತ್ತಿದ್ದರು ಆರೋಗ್ಯಗುಣಪಡಿಸಲು ವೈದ್ಯಕೀಯ ಚಿಕಿತ್ಸೆ ಅಥವಾ ಆಹಾರ ಪದ್ಧತಿ ಯಾವುದೇ ಪಾತ್ರ ವಹಿಸುವುದಿಲ್ಲ ಎಂಬ ಮನವರಿಕೆ ಮಾಡಿಕೊಂಡರು ಅದಕ್ಕಾಗಿ ಆರೋಗ್ಯವನ್ನು ಮತ್ತಷ್ಟು ಬಲಪಡಿಸಲು ರಿದಿಮಾ 2019 ರಲ್ಲಿ ನಾಮ್ಹಾನ್ಯ ಪುಡ್ಸ್‌ ಸ್ಥಾಪಿಸುತ್ತಾರೆ ಸಾಮಾನ್ಯವಾಗಿ ನಾವು ದಿನನಿತ್ಯ ಸೇವಿಸುವ ಆಹಾರ ಉತ್ತಮವಾಗಿ ಇರಬೇಕೆಂದು ಯೋಚಿಸುತ್ತೇವೆ ಅದಕ್ಕಾಗಿ ಮನೆಯಲ್ಲಿ ತಯಾರಿಸಿದ ಅಥವಾ ಆನೈನ್ ಮೂಲಕ ಆಹಾರವನ್ನು ಖರೀದಿಸುತ್ತೇವೆ.

ನಾವು ಸೇವಿಸುವ ಆಹಾರ ನಮ್ಮಆರೋಗ್ಯವನ್ನು ಅದೇಗಿಡಲು ಹೆಚ್ಚು ಸಮಯ ಬೇಕೆಂದಿಲ್ಲ ಅದರಿಂದ ದಿನನಿತ್ಯದ ಒತ್ತಡಗಳು ನಿದ್ರೆ ಸರಿಯಾಗಿ ಬರದಿರುವುದು ಹದಗೆಡಿಸುತ್ತದೆ ಈ ಎಲ್ಲ ನಮ್ಮಆರೋಗ್ಯವನ್ನು ಮನವರಿಕೆ ಮಾಡಿಕೊಂಡ ರಿದಿಮ ಸಂಸ್ಥೆಯನ್ನು ಪ್ರಾರಂಭ ಮಾಡುತ್ತಾರೆ ಆಯುರ್ವೇದವನ್ನು ಬಳಸಿ ಪೋಸ್ಟಿಕಾಂಶ ಇರುತವಾದ ಆಹಾರವನ್ನು ಚಿಕಿತ್ಸಾಹಿತವಾಗಿ ಅನ್ವೇಷಣೆ ಮಾಡಿಕಂಪನಿ ಶುರು ಮಾಡುತ್ತಾರೆ .ಜಮ್ಮುವಿನಲ್ಲಿ ಸ್ಥಾಪನೆಯಾದ ಈ ಕಂಪನಿಯು ಭಾರತದಲ್ಲಿಸಿಗುವ ಎಲ್ಲಾ ತರಹದ ಆಯುರ್ವೇದ ಗಿಡಮೂಲಿಕೆಗಳನ್ನ ಮತ್ತು ಪೌಷ್ಟಿಕಾಂಶ ಪದಾರ್ಥಗಳನ್ನು ಹೊಂದಿದೆ. ಈ ಮೂಲೆಗಳಲ್ಲಿ ಯಾವುದೇ ರೀತಿಯ ಎಣ್ಣೆಐರನ್ ಶುಗರ್ಸ್ ಗಳನ್ನು ಬಳಕೆ ಮಾಡದೆ ಉತ್ತಮ ಗುಣಮಟ್ಟದ ಔಷಧಿಗಳನ್ನು ಜನರಿಗೆ ತಲುಪಿಸುವಲ್ಲಿ ಸಾಧ್ಯವಾಗುತ್ತಿದೆ.

ಕೋವಿಡ್ ಸಂಕಷ್ಟದ ವೇಳೆ ಸಂಸ್ಥೆ ಪ್ರಾರಂಭಿಸಿ ಜನರಿಗೆ ಹೆಚ್ಚು ಪ್ರಯೋಜನಕಾರಿ ಆದಂತಹ ಔಷಧ ಅಂಶಗಳನ್ನು ನೀಡುತ್ತಾ ಹೆಚ್ಚು ಸಹಕಾರಿಯಾಗಿದೆ .ಮತ್ತು ಮಹಿಳೆಯರ ಮುಟ್ಟಿನ ಸಮಸ್ಯೆಗೆ ಮುಕ್ತಿ ಸಹ ಈ ಕಂಪನಿಯಿಂದ ಔಷಧ ಅಂಶವಾಗಿ ಕೊಡುತ್ತಿದ್ದಾರೆ.ಹಲವಾರು ಸಂಶೋಧನೆ ಬಳಿಕ ಉತ್ತಮ ಗುಣಾತ್ಮಕ ಔಷದ ಪ್ರಾಡಕ್ಟ್ ಗಳನ್ನ ಕಂಪನಿಯು ಜನರನ್ನ ವಾಸ್ತವದ ಕಡೆ ಕರೆತರಲು ಆಯುರ್ವೇದ ಭರಿತವಾದ ಉತ್ಪನ್ನಗಳನ್ನು ಪರಿಚಯಿಸಿ ಇಂದು ಕೋಟಿ ಕೋಟಿ ವ್ಯವಹಾರವನ್ನು ತನ್ನ ಮುಡಿಗೆರಿಸಿಕೊಂಡಿದೆ.

ವಿಶ್ವದ ಅತಿ ದೊಡ್ಡ ಥೈರಾಯ್ಡ್ ಸಾಮ್ರಾಜ್ಯ ಕಟ್ಟಿದ ಯಶೋಗಾಥೆ!

ಒಂದು ಕಾಲದಲ್ಲಿ ಶಾಲೆಯ ಊಟಕ್ಕೆ ಪ್ಲೇಟ್ ಹಿಡಿದು ಊಟ ಮಾಡಿದ ವ್ಯಕ್ತಿ ಸಾವಿರಾರು ಕೋಟಿಯ ಆಸ್ತಿ ಒಡೆಯನಾದ ವ್ಯಕ್ತಿ ಎಂದರೆ “ಅರೋಕಿಸ್ವಾಮಿ ವೆಲುಮಣಿ” ಇವರು ಈಗ ಶ್ರೀಮಂತ ವ್ಯಕ್ತಿಗಳ ಸಾಲಿನಲ್ಲಿ ಬೆಳೆದು ನಿಂತ್ತಿದ್ದಾರೆ. ಇವರು ‘ಒಂದು ಕಡೆ ಸ್ಟೇಟ್, ಮತ್ತೊಂದು ಕೈಯಲ್ಲಿ ಒಂದು ಪ್ಲೇಟ್’ ಮಾತನ್ನು ನೆನಪಿನಲ್ಲಿಟ್ಟುಕೊಂಡು ವಿಶ್ವದ ಅತಿದೊಡ್ಡ ಥೈರಾಯ್ಡ್ ಪರೀಕ್ಷಾ ಪ್ರಯೋಗಾಲಯವನ್ನು ಪ್ರಾರಂಭಿಸಿ 3,300 ಕೋಟಿ ರೂ ವಹಿವಾಟು ಮಾಡುತ್ತಿರುವ ವೇಲುಮಣಿ ಸ್ವತಹ ತಮ್ಮಸಾಧನೆಯ ಬಗ್ಗೆ ತಿಳಿಸಿದ್ದಾರೆ.ಬಡತನದ ಯುದ್ಧದಲ್ಲಿ ಬೇಸದು ಯಶಸ್ಸನ್ನು ಗಳಿಸಿದ್ದೇನೆ. ತಮಿಳು ನಾಡಿನ ಕೊಯಮತ್ತೂರಿನಲ್ಲಿ 7 ಜನರು ಇರುವ ಕುಟುಂಬದಲ್ಲಿ ಏಪ್ರಿಲ್ 1959 ರಲ್ಲಿ, ಭೂಮಿ ಇಲ್ಲದೆ ಇರುವ ರೈತರ ಮನೆಯಲ್ಲಿ ಜನಿಸಿದೆ.

ನನ್ನ ತಂದೆಗೆ ಮನೆಯನ್ನು ನಿಭಾಯಿಸಲು ಕೂಡ ಕಷ್ಟವಾಗಿತ್ತು.ನನ್ನ ತಾಯಿ ಎರಡು ಎಮ್ಮೆಗಳನ್ನು ಸಾಕಿ ವಾರಕ್ಕೆ 50 ರೂ ಗಳಿಸುತ್ತಿದ್ದರು ಅದರಿಂದ ಮನೆ ನಡೆಯುತ್ತಿತ್ತು. ನನಗೆ ಒಂದು ಜೋಡಿ ಚಪಲ್ಲಿ ಕೊಡಿಸಲು ಸಹ ಆಗುತ್ತಿರಲಿಲ್ಲ ಅಷ್ಟೊಂದು ಕಡು ಬಡತನ ನಮ್ಮದು,ಶಾಲೆಯಲ್ಲಿ ಸಿಗುವ ಊಟದ ಆಸೆಗೆ ಶಾಲೆಯ ಮೆಟ್ಟಿಲು ಹತ್ತುತ್ತಿದೆ ಅದೇ ನನಗೆ ಜೀವನ ಕಳಿಸಿತುನಂತರ ಬಿಎಸ್ಪಿ ಪದವಿ ಪಡೆದು ಕೊಯಮತ್ತೂರಿನಲ್ಲಿ ಸಣ್ಣ ಔಷಧೀಯ ಕಂಪೆನಿಯನ್ನು ಸೇರಿಕೊಂಡೆ ಆಗ ನನಗೆ 150 ರೂ ಸಂಬಳ ವಿತ್ತು, 3 ವರ್ಷದಲ್ಲಿ ಆ ಕಂಪನಿ ಮುಚ್ಚಿಕೊಂಡಿತು.ನಂತರ 3 ವರ್ಷಗಳು ಕೆಲಸವಿಲ್ಲದೇ ತಿರುಗುವ ಪರಿಸ್ಥಿತಿ ಬಂದಿತ್ತು.ನಂತರ ಪ್ರತಿಷ್ಠಿತ ಭಭಾ ಅಟಾಮಿಕ್ ಸಂಶೋಧನಾ ಕೇಂದ್ರದಲ್ಲಿ ಕೆಲಸ ದೊರೆಯಿತು.

ಮಾಡಲು ಸಾಧ್ಯವಾಗಿತು. ಇದರಿಂದ ಥೈರಾಯ್ಡ್ ಜೀವರಸಾಯನಶಾಸ್ತ್ರದಲ್ಲಿ PHD ಪದವಿಯನ್ನು ಪಡೆದುಕೊಂಡೆ ನನ್ನ ಶ್ರದ್ಧೆ ಮತ್ತು ಗಮನದಿಂದ “1982 ರಲ್ಲಿ ಥೈರಾಯಿಡ್ ಗ್ರಂಥಿ ಎಲ್ಲಿದೆ ಎಂದು ನನಗೆ ತಿಳಿದಿರಲ್ಲಿಲ್ಲದ ನನಗೆ 1995 ರ ಹೊತ್ತಿಗೆ, ಥೈರಾಯ್ಡ್ ಜೀವರಸಾಯನಶಾಸ್ತ್ರದಲ್ಲಿ ಈ ಪದವಿಯನ್ನು ಪಡದೆ.

ನಂತರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಕೆಲಸ ಮಾಡುತ್ತಿದ್ದ ಸುಮತಿ ಅವರನ್ನು ಮದುವೆಯಾದರು ಸ್ವಲ್ಪ ದಿನಗಳ ನಂತರ ಸ್ವಂತ ಥೈರಾಯಿಡ್ ಪ್ರಯೋಗಾಲಯವನ್ನು ಪ್ರಾರಂಭಿಸುವ ಯೋಚನೆಯಲ್ಲಿಸುಮತಿ ಕೆಲಸ ಬಿಡಲು ತಿಳಿಸಿದೆ.ಸುಮತಿ ಈಗಾಗಲೇ 14 ವರ್ಷಗಳು ಬ್ಯಾಂಕ್-ನಲ್ಲಿ ಕೆಲಸ ಮಾಡಿ ಕೆಲಸಕ್ಕೆ ರಾಜಿನಾಮೆ ಕೊಟ್ಟು ಪ್ರಾವಿಡೆಂಟ್ ನಿಧಿಯಿಂದ 2 ಲಕ್ಷ ರೂಪಾಯಿ ಹೂಡಿಕೆಯೊಂದಿಗೆ ಅವರು ಥೈರೋರೆ ಅನ್ನು ಪ್ರಾರಂಭಿಸಿದರು. ಆರಂಭದಲ್ಲಿ, ಈ ಕಂಪನಿ ಥೈರೊಡೈರ್ ಥೈರಾಯಿಡ್-ಸಂಬಂಧಿತ ಅಸ್ವಸ್ಥತೆಗಳ ರೋಗನಿರ್ಣಯದ ಮೇಲೆ ಗಮನ ಕೇಂದ್ರೀಕರಿಸಲ್ಪಟ್ಟಿತು.ನಂತರ ಕಂಪನಿಯು ಬೆಳದಂತೆ ಡೊಮೇನ್ ಮಧುಮೇಹ, ಬಂಜೆತನ, ಹೃದಯ ಸಂಬಂಧಿ ಸಮಸ್ಯೆಗಳು ಮತ್ತು ಲೈಂಗಿಕವಾಗಿ ಹರಡುವ ರೋಗಗಳು ಪತ್ತೆಹಚ್ಚುವ ಪ್ರಯೋಗಾಲಯವನ್ನು ವಿಸ್ತರಿಸಿದರು.

ಎರಡು ವರ್ಷಗಳ ಹಿಂದೆ ಕಂಪನಿ 3,415 ಕೋಟಿ ರೂಪಾಯಿ ಮೌಲ್ಯದ ಮಾರುಕಟ್ಟೆಗೆ ತಲುಪಿದೆ. ಇದು ಭಾರತದ ತುಂಬೆಲ್ಲ ನೇಪಾಳ, ಬಾಂಗ್ಲಾದೇಶ, ಮಧ್ಯಪ್ರದೇಶ ಸೇರಿದಂತೆ 1,250 ಕೇಂದ್ರಗಳನ್ನು ಹೊಂದಿದೆ. ಕಂಪನಿ ಒಂದು ವರ್ಷಕ್ಕೆ ಈಗ 30 ಮಿಲಿಯನ್ ರೋಗನಿರ್ಣಯ ಪರೀಕ್ಷೆಗಳನ್ನು ಮಾಡುತ್ತಿದೆ. ಈ ಸಾಧನೆಯಗೆ ಬೆನ್ನೆಲಬು ಆದ ವೇಲುಮಣಿ ಪತಿ ಸುಮತಿ ಫೆಬ್ರವರಿ 2016 ರಲ್ಲಿ ಕ್ಯಾನ್ಸರ್ ರೋಗಗಕ್ಕೆ ತುತ್ತಾಗಿ. ಮಕ್ಕಳ ಜೊತೆಯಲ್ಲಿ ಜೀವನ ನಡೆಸುತ್ತಿದ್ದಾರೆ.

ಇತರ ವಿಷಯಗಳು :

join WhatsApp Group

BANGALORE UPDATES

Leave a Comment