fbpx

ಮೋದಿ ಹೊಗಳಿದ ಕೃಷಿಕನ ಕೈಹಿಡಿದಿದ್ದು ಜೇನು ಕೃಷಿ

ಮೋದಿ ಹೊಗಳಿದ ಕೃಷಿಕನ ಕೈಹಿಡಿದಿದ್ದು ಜೇನು ಕೃಷಿ

ಜೇನು ಕೃಷಿಯನ್ನು ನಂಬಿ ಕೋಟಿ ಕೋಟಿ ಸಂಪಾದಿಸಿದ ಕೃಷಿಕರ ಕುರಿತು ಹೇಳಿದ್ರೆ ನೀವು ನಂಬುತ್ತಿರಾ? ಹೌದು ಉತ್ತರ ಕನ್ನಡದ ಕೃಷಿಕರೊಬ್ಬರು ದಿನದ ಕೆಲಸದ ಜೊತೆಗೆ ಸಾಲ ಮಾಡಿ ಆರಂಭಿಸಿದ ಜೇನು ಕೃಷಿಯೊಂದು ಇದೀಗ 18 ಕೋಟಿ ಆದಾಯ ಸಂಪಾದಿಸುವಂತೆ ಮಾಡಿದೆ.ಮಾತ್ರವಲ್ಲದೆ ಈ ಸಾಧಕನ ಕುರಿತು ಪ್ರಧಾನಿ ನರೇಂದ್ರ ಮೋದಿ ಕೂಡ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಮಾತನಾಡುವ ಮಟ್ಟಿಗೆ ಮಧುಕೇಶ್ವರ ಇವರು ಪ್ರಸಿದ್ಧರಾಗಿದ್ದಾರೆ.ಶಿರಸಿ ತಾಲ್ಲೂಕಿನ ತಾರಗೋಡ ಗ್ರಾಮದ ಜೇನು ಕೃಷಿಕ ಮಧುಕೇಶ್ವರ ಹೆಗಡೆ ಜೇನು ಕೃಷಿ ಇದೀಗ ದೇಶಕ್ಕೆ ಪರಿಚಯವಾಗಿದೆ.ಮಧುಕೇಶ್ವರ ಅವರು ವಿಧ ವಿಧವಾದ ಜೇನು ತಯಾರಿಕೆಯಲ್ಲಿ ನಿಸ್ಸಿಮರು ಪ್ರಸ್ತುತವಾಗಿ ಇವರು ಜಾಮೂನ್ ಜೇನು, ತುಳಸಿ ಜೇನು, ಆಮ್ಲಾ ಜೇನು, ಜೊತೆಗೆ ವನಸ್ಪತಿ ಜೇನನ್ನೂ ಉತ್ಪಾದಿಸುತ್ತಿದ್ದಾರೆ.

ಜೇನು ಸಾಕಾಣೆ ಮತ್ತು ಅದರ ನಿರ್ವಹಣೆ!

ಜೇನು ಸಾಕಾಣಿಕೆ ಅಂದುಕೊಂಡಷ್ಟು ಸುಲಭವಲ್ಲ. ನಿರ್ವಹಣೆಯಲ್ಲಿ ಎಚ್ಚರ ತಪ್ಪಿದ್ರೆ ಭಾರೀ ನಷ್ಟ ಕಟ್ಟಿಟ್ಟ ಬುತ್ತಿ. ಅದೇ ರೀತಿ ಇದನ್ನು ಕ್ರಮಬದ್ಧವಾಗಿ ನಿರ್ಹಹಣೆ ಮಾಡಿದ್ರೆ ಯಶಸ್ಸು ಕೂಡ ಸುಲಭ ಸಾಧ್ಯಎಂದು ಸ್ವತಃ ಮಧುಕೇಶ್ವರ ಅವರು ಅಭಿಪ್ರಾಯ ಪಡುತ್ತಾರೆ.ಹೂವಿನ ಅಭಾವ ಆದಾಗ ಆಹಾರದ ಕೊರತೆ ಆಗದಂತೆ ಸಕ್ಕರೆ ಪಾಕ ನೀಡಬೇಕು.ಇತರೆ ಕೀಟಗಳ ದಾಳಿಯಿಂದ ರಕ್ಷಣೆ ಒದಗಿಸಬೇಕು,ಕಾಲಕಾಲಕ್ಕೆ ತಕ್ಕಂತೆ ಪೆಟ್ಟಿಗೆಗಳಿಂದ ನೊಣಗಳನ್ನು ಬೇರ್ಪಡಿಸಬೇಕು ಮತ್ತು ಪೆಟ್ಟಿಗೆಗಳನ್ನು ಸ್ವಚ್ಛಗೊಳಿಸಬೇಕು.ಮಳೆಗಾಲದಲ್ಲಿ ಜೇನು ನೊಣಗಳನ್ನು ಹಾಗೂ ಪೆಟ್ಟಿಗೆಯನ್ನು ರಕ್ಷಿಸಲು ಅನೇಕ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ.ಮಳೆಗಾಲದಲ್ಲಿ ಅತೀ ಎಚ್ಚರಿಕೆ ಅತ್ಯಗತ್ಯಪ್ಲಾಸ್ಟಿಕ್ ಮುಚ್ಚುವುದು, ಮಳೆ ಬೀಳದ ಸ್ಥಳದಲ್ಲಿ ಇಡುವುದು ಇದನ್ನು ಮಾಡುವುದು ಅಗತ್ಯ

ಮಧುಕೇಶ್ವರ್ ಸಾಧನೆಗೆ ದೊರೆತ ಪುರಸ್ಕಾರ!

ಸಾಧಕನ ಸಾಧನೆ ಯಾವತ್ತೂ ವಿಫಲವಲ್ಲ ಅದಕ್ಕೆ ತಕ್ಕನಾದ ಪ್ರತಿಫಲ ಸಮಯಕ್ಕೆ ಅನುಗುಣವಾಗಿ ಖಂಡಿತವಾಗಿಯೂ ದೊರೆಯುವುದರಲ್ಲಿ ಯಾವುದೇ ಸಂದೇಹವಿಲ್ಲ ಹಾಗೆಯೇ ಇವರ ಸಾಧನೆಯನ್ನು ಗುರುತಿಸಿ 2007-08ರಲ್ಲಿ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆ ಸಂಘವು ಕೃಷಿ ಸಾಧಕ ಪ್ರಶಸ್ತಿಯನ್ನು ನೀಡಿ ಗೌರವಿಸಿತು.2009ರಲ್ಲಿ ಕರ್ನಾಟಕ ಸರ್ಕಾರದ ಕೃಷಿ ಇಲಾಖೆಯಿಂದ ಕೃಷಿ ಪಂಡಿತ ಪ್ರಶಸ್ತಿ,ತೋಟಗಾರಿಕಾ ಇಲಾಖೆಯಿಂದ ರಾಜ್ಯಮಟ್ಟದ ಪ್ರಗತಿಪರ ಜೇನು ಕೃಷಿಕ ಪ್ರಶಸ್ತಿ, ಧಾರವಾಡ ವಿಶ್ವವಿದ್ಯಾಲಯದಿಂದ ಇನ್ನೋವೇಟಿವ್ ಫಾರ್ಮರ್ ಪ್ರಶಸ್ತಿ, ಬಾಗಲಕೋಟೆ ವಿಶ್ವವಿದ್ಯಾಲಯದಿಂದ ಶ್ರೇಷ್ಠ ತೋಟಗಾರಿಕೆ ರೈತ ಪ್ರಶಸ್ತಿ ಲಭಿಸಿದೆ.ಇವುಗಳಲ್ಲದೆ ಕರ್ನಾಟಕ ರತ್ನ ಪ್ರಶಸ್ತಿ, ಕೃಷಿ ರತ್ನ ಪ್ರಶಸ್ತಿ, ಫಾರ್ಮರ್ ಸೈಂಟಿಸ್ಟ್ ಅವಾರ್ಡ್‌ ಸೇರಿದಂತೆ ಹಲವಾರು ಪ್ರಶಸ್ತಿಗಳು ಇವರನ್ನು ಅರಸಿ ಬಂದಿದೆ.

..

 

L

 

Leave a Comment