ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಗೃಹಲಕ್ಷ್ಮಿ ಯೋಜನೆಯೂ ಒಂದಾಗಿದೆ. ಈ ಯೋಜನೆಯ ಅಡಿಯಲ್ಲಿ ರಾಜ್ಯದ ಕುಟುಂಬದ ಯಜಮಾನಿ ಮಹಿಳೆಯರಿಗೆ ಪ್ರತಿ ತಿಂಗಳು 2000 ರೂಪಾಯಿ ಸಹಾಯಧನ ನೀಡಲಾಗುತ್ತಿದೆ. ಇಂತಹ ಹಣ ಕೆಲ ಯಜಮಾನಿಯರ ಖಾತೆಗೆ ವರ್ಗಾವಣೆಯಾಗಿರಲಿಲ್ಲ.
ಇವರಿಗೆ ಸಿಎಂ ಸಿದ್ಧರಾಮಯ್ಯ ಸಿಹಿಸುದ್ದಿ ನೀಡಿದ್ದಾರೆ. ಅದೇನು ಅಂತ ಮುಂದೆ ಓದಿ. ಚಿತ್ರದುರ್ಗದಲ್ಲಿ ಶುಕ್ರವಾರದಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು, ಕೆಲ ಯಜಮಾನಿ ಮಹಿಳೆಯರ ಖಾತೆಗೆ ಗೃಹಲಕ್ಷ್ಮಿ ಯೋಜನೆಯ 2000 ರೂಪಾಯಿ ಹಣ ತಾಂತ್ರಿಕ ಸಮಸ್ಯೆಯಿಂದ ಜಮಾ ಆಗಿಲ್ಲ.
ರಾಜ್ಯದಲ್ಲಿನ ಯಜಮಾನಿ 1.26 ಕೋಟಿ ಮಹಿಳೆಯರಿಗೆ ಗೃಹಲಕ್ಷ್ಮೀ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಈಗಾಗಲೇ ಇವರಲ್ಲಿ 1.10 ಕೋಟಿ ಯಜಮಾನಿ ಮಹಿಳೆಯರ ಖಾತೆಗೆ ಡಿಬಿಟಿ ಮೂಲಕ 2000 ರೂಪಾಯಿ ಹಣ ಜಮಾ ಮಾಡಲಾಗಿದೆ.
ಆದರೇ, 16 ಲಕ್ಷ ಜನರಿಗೆ ಬ್ಯಾಂಕ್ ಖಾತೆ, ಆಧಾರ್ ಜೋಡಣೆಯಾಗದ ತಾಂತ್ರಿಕ ಕಾರಣದಿಂದ ಜಮಾ ಆಗಿಲ್ಲ. ಈ ಸಮಸ್ಯೆ ಸರಿಪಡಿಸಿ ಕೆಲವೇ ದಿನಗಳಲ್ಲಿ ಹಣವನ್ನು ಯಜಮಾನಿಯರ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ ಅಂತ ತಿಳಿಸಿದ್ದಾರೆ.