ಸರ್ಕಾರದ ಐದು ಶಕ್ತಿ ಯೋಜನೆಗಳಲ್ಲಿ ಒಂದಾದ ಈ ಗೃಹ ಜ್ಯೋತಿ ಯೋಜನೆ ಶುರುವಾಗಿ ಮೂರು ತಿಂಗಳುಗಳು ಕಳೆದುದು ಹೊತ್ತುಹೋಗಿದೆ. ತುಂಬಾ ಜನರು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿ ಇದರ ಲಾಭವನ್ನು ಪಡೆದುಕೊಂಡಿದ್ದಾರೆ.
ಈ ಯೋಜನೆ ಮನೆಯ ಮಾಲೀಕರಿಗೆ ಮಾತ್ರವಲ್ಲದೆ ಬಾಡಿಗೆದಾರರಿಗೂ ಅನ್ವಯಿಸುತ್ತದೆ. ಬಾಡಿಗೆದಾರರು ಕೂಡ ಆನ್ಲೈನ್ ಅರ್ಜಿಯನ್ನು ಸಲ್ಲಿಸಿ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದಾಗಿದೆ.
ಈ ಯೋಜನೆಯ ಪ್ರಮುಖ ಶರತ್ವುಗಳು ಏನೆಂದರೆ ನಾವು ಬಳಸುವ ವಿದ್ಯುತ್ ಎರಡುನೂರು ಯೂನಿಟ್ ಗಿಂತ ಕಡಿಮೆ ಇರಬೇಕು ಮತ್ತು ನಾವು ಒಂದು ವೇಳೆ ಎರಡು ನೂರು ಯೂನಿಟ್ ಗಿಂತ ಜಾಸ್ತಿ ಕರೆಂಟ್ ಅನ್ನು ಬಳಸಿದರೆ ಈ ಯೋಜನೆಯ ಅನ್ವಯವಾಗುವುದಿಲ್ಲ.
ಒಂದು ವೇಳೆ ನೀವು ಪ್ರತಿ ತಿಂಗಳು 200 ಯೂನಿಟ್ ಗಿಂತ ಹೆಚ್ಚಿನ ವಿದ್ಯುತ್ ಉಪಯೋಗಿಸುತ್ತಿರೋ ಆ ತಿಂಗಳು ನೀವು ಪೂರ್ತಿ ಹಣವನ್ನು ಪಾವತಿಸಬೇಕು. ನೀವು ಅರ್ಜಿ ಸಲ್ಲಿಸುವ ಮುನ್ನ ಇದನ್ನೆಲ್ಲ ಯೋಚಿಸಿ ಅರ್ಜಿ ಸಲ್ಲಿಸುವುದು ಒಳ್ಳೆಯದು.
ಯಾವ ತಿಂಗಳು ನೀವು 200 ಯೂನಿಟ್ ಗಿಂತ ಹೆಚ್ಚಿನ ವಿದ್ಯುತ್ ಉಪಯೋಗಿಸುತ್ತಿರೋ ಆ ತಿಂಗಳು ನೀವು ಪೂರ್ತಿ ಹಣವನ್ನು ಕಟ್ಟಬೇಕು. ಆದರೆ ಕೆಲವರು ಅರ್ಜಿ ಸಲ್ಲಿಸಿದರು ಕೂಡ ಅವರಿಗೆ ಹೆಚ್ಚಿನ ವಿದ್ಯುತ್ ಉಪಯೋಗವಾಗುತ್ತದೆ ಅಂತ ಇನ್ನುವರೆಗೂ ಯಾವುದೇ ರಿಯಾಯಿತಿ ಸಿಕ್ಕಿಲ್ಲ. ಅವರು ಪೂರ್ತಿ ಬಿಲ್ಲನ್ನ ಕಟ್ಟುತ್ತಿದ್ದಾರೆ.
ನೀವು ಕೂಡ ಅರ್ಜಿ ಸಲ್ಲಿಸಿ, ಈ ತರಹ ಪರಿಸ್ಥಿತಿಯನ್ನು ಎದುರಿಸಬೇಕಾಗಿವೆಂದರೆ ನೀವು ದೂರನ್ನು ಕೊಡಬಹುದು. ಎಲ್ಲ ದಾಖಲಾತಿಗಳ ಜೊತೆಗೆ ನಿಮ್ಮ ಹತ್ತಿರದ ವಿದ್ಯುತ್ ಕಚೇರಿಗೆ ಹೋಗಿ ನಿಮ್ಮ ಗೊಂದಲಗಳನ್ನು ನೀವು ಬಗೆಹರಿಸಿಕೊಳ್ಳಬಹುದು. ನಿಮಗೆ ವಿದ್ಯುತ್ ಉಚಿತವಾಗಿ ಬೇಕು ಎಂದರೆ ಮನೆಯಲ್ಲಿ ನೀವು ಕಡಿಮೆ ಕರೆಂಟನ್ನು ಉರಿಸಬೇಕು.
ಎಲ್ಲವನ್ನು ಗಮನಿಸಿ ನೀವು ಸರಿಯಾಗಿ ವಿದ್ಯುತ್ ಅನ್ನು ಉಪಯೋಗಿಸಿಕೊಂಡರೆ ಖಂಡಿತವಾಗಲೂ ಯೋಜನೆಯ ಫಲವನ್ನು ನೀವು ಪಡೆಯಬಹುದು. ಯೋಜನೆಯು ಎಲ್ಲರಿಗೂ ಅನ್ವಯವಾಗಿದ್ದು, ಸೋಲಾರ್ ಬಳಸುವವರು ಕೂಡ ಯೋಜನೆಯ ಲಾಭವನ್ನು ಪಡೆಯಬಹುದು. ಸದ್ಯಕ್ಕೆ ಗ್ರಹ ಜ್ಯೋತಿ ಯೋಜನೆಯ ಅರ್ಜಿ ಸಲ್ಲಿಕೆ ಬಂದಾಗಿದ್ದು, ಪುನಃ ಆರಂಭವಾಗುವ ಹಂತದಲ್ಲಿದೆ.
ಇತರೆ ವಿಷಯಗಳು:
ರಾಜ್ಯದ ಶಾಲಾ ಮಕ್ಕಳಿಗೆ ಸಿಹಿ ಸುದ್ದಿ, ಶೀಘ್ರವೇ ಬ್ಯಾಗ್ ಹೊರೆ ಇಳಿಕೆ, ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
ಸೆಪ್ಟೆಂಬರ್ 26 ರಂದು ಬೆಂಗಳೂರು ಬಂದ್, ಏನೆಲ್ಲಾ ಇರುತ್ತೆ! ಏನಿರಲ್ಲಎನ್ನುವ ಮಾಹಿತಿ ಇಲ್ಲಿದೆ ನೋಡಿ.